ದೇವಾಂಗ ಜಗದ್ಗುರುಗಳ ಸಾಹಸಗಾಥೆ ಭಾಗ:1

ಗುರು ಶಬ್ದದ ಅರ್ಥ, ಗುಕಾರಸ್ಯ ಗುಣಾತೀಶ, ರೂಪಾತೀತ ಗುಣಗಳಿಗೂ ರೂಪಕ್ಕೂ ಅತೀತರಾ ದಂತಹ ಜಗದ್ಗುರು ಶ್ರೀ ಮುದ್ದುಸಂಗ ಮಹಾಮುನಿ ಪ್ರಪಂಚ ವನ್ನು ಉದ್ದಾರ ಮಾಡಿದರು.

ಮಾನವನ ಮಾನ, ಅಭಿಮಾನ ರಕ್ಷಣೆಗಾಗಿ ಈಶ್ವರನ ಹಣೆ ಗಣ್ಣಿಂದ ಹುಟ್ಟಿದ ದೇವಾಂಗನ (ನವಲನ) ಅನುಚರರ ಪರದ ಪವಿತ್ರ ದೇವಾಂಗ ಮತವಿದು. ದೇವಾಂಗ ಧರ್ಮ ಸುಮಾರು 5-6 ಶತಮಾನಗಳ ಹಿಂದೆ ಸ್ವಧರ್ಮ ರಕ್ಷಕರಿಲ್ಲದೆ ಪರಧರ್ಮದ ದಾಳಿಗೆ ಸಿಕ್ಕಿ, ದೇವಾಂಗದವರು ಬಲವಂತವಾಗಿ ಮತಾಂತರ ಗೊಂಡ ಕಾಲದಲ್ಲಿ ಗಂಗಾವತಿ ಗ್ರಾಮದಲ್ಲಿ ದೇವಾಂಗ ಧರ್ಮೋ ದ್ವಾರಕ ಮಹಾಪುರುಷ ಫಣಿಗೌಡ ಜನಿಸಿದನು. ದೇವಾಂಗ ಧರ್ಮ ಗ್ರಂಥಗಳ ಸತತ ಪಠನೆ, ಧರ್ಮ ಗ್ರಂಥಾನ್ವೇಷಣೆ ಮುಂತಾ ದವಲ್ಲಿ ನಿರತನಾಗಿ ಚೌಡೇಶ್ವರಿ ಅಮ್ಮನವರ ಪರದು ಭಕ್ತನಾಗಿ ಕುಲಕಾಯಕವಾದ ನೇಯ್ಕೆ ಕೆಲಸ ಮಾಡುತ್ತಿದ್ದನು.

ಕಲ ಕಾಲಾನಂತರ ಬಲವಂತದಿಂದ ಮತಾಂತರಗೊಳಿಸಲು ಮುಂದಾದ ಪರಮತದವರು ಗೌಡನ ದೇವಾಂಗ ಮತ ಪರ ವಾದವನ್ನು ಒಪ್ಪದೇ, ವಿದ್ಯಾನಗರಾಧಿಪತಿ ವೀರಪ್ರತಾಪನ ಮುಂದೆ ಹೋದರು. ಆಗ ಘಣಗೌಡ ರಾಜನಿಗೆ ನಮ್ಮ ದೇವಾಂಗ ಧರ್ಮ, ಗುರು, ದೈವತ, ರೂಢಿ ನೀತಿಗಳೇ ಬೇರೆ. ನಮ್ಮ ಆಚಾರ ವ್ಯವಹಾರಗಳು, ಗುರು ಪರಂಪರೆ ಶಾಸ್ತ್ರ ಸಮ್ಮತ, ಅನಾದಿ ಕಾಲದವು" ಎಂದು ಅರಿಕೆ ಮಾಡಿದನು. " ನಿನ್ನ ದೇವಾಂಗ ಮತ ಸನಾತನ ಧರ್ಮವೆಂದು ಸಮರ್ಥಿಸಿ ಗುರುವನ್ನು ತೋರಿದರೆ ಮಾತ್ರ ನಿನ್ನ ವಾದ ಸಮ್ಮತ ವೆಂದು ರಾಜ ಹೇಳಿದನು. ಫಣಿಗೌಡ ಅರಸನಿಂದ ಕೆಲ ದಿನಗಳ ಅವಧಿ ಕೇಳಿಕೊಂಡು ತೆರಳಿದನು.

ಫಣಿಗೌಡ ಪುಣ್ಯಕ್ಷೇತ್ರಗಳು, ಸಪ್ತ ಮೋಕ್ಷಪುರಿಗಳನ್ನೂ ಅನೇಕ ಮಹನೀಯರನ್ನೂ ಕಂಡು ಗುರುಗಳ ಶೋಧನೆ ಮಾಡಿದನು. ಕೊನೆಗೆ ವಾರಣಾಸಿಯಲ್ಲಿ ಮಹಾ ಪುರುಷನೊಬ್ಬ ಹೀಗೆ ಸುಮ್ಮನೆ ಅಲೆಯದ, ಭಗವಂತನನ್ನು ಕುರಿತು ಪವಿತ್ರ ಸ್ಥಳದಲ್ಲಿ ತಪಸ್ಸು ಮಾಡಲು ಹೇಳಿದನು. ಅದರಂತೆ, ಗಂಗಾವತಿ ಗ್ರಾಮದ ಪಕ್ಕದಲ್ಲಿ ಕಾಡಿನ ನಡುವೆ ಸಣ್ಣ ಬೆಟ್ಟದ ಮೇಲೆ ಒಂದು ಗವಿ ಯಲ್ಲಿ ಫಣಿಗೌಡ ವರ್ಷಗಳ ಕಾಲ ತಪಸ್ಸು ಮಾಡಿದರೂ ಕೈಗೂಡದ್ದರಿಂದ, ತಾನು ಬದುಕಿ ಫಲವಿಲ್ಲವೆಂದೂ ದೇಹತ್ಯಾಗ ಮಾಡಬೇಕೆಂದುಕೊಂಡನು. ಮನದಾಳದಲ್ಲಿ ಮುಂದುವರಿಸುವ ಭಾವನೆ ಇದ್ದುದರಿಂದ, ತಪಸ್ಸನ್ನು ಮುಂದುವರಿಸಿದನು.

ಒಂದು ದಿನ ಫಣಿಗೌಡ ಘೋರ ತಪಸ್ಸಿನಲ್ಲಿದ್ದಾಗ, ಮಧುರ ನಾದ ಕೇಳಿಸಿದ ಕಡೆ ನೋಡಿದನು. ಕಣ್ಣು ಕೋರೈಸುವ ಒಂದು ದಿವ್ಯ ಪ್ರಭೆ ಇವನ ಮುಂದೆ ಬಂದು ನಿಂತು ಇವನನ್ನು ಎಚ್ಚರಿಸಿತಂ. ಎದುರು ನಿಂತ ತೇಜ ಪೂಂಜ ದಿವ್ಯ ಮೂರ್ತಿಯನ್ನು ಕಂಡು

ಸಾಕ್ಷಾತ್ ದೇವಲ ಮಹಾಮುನಿಯ ತನ್ನ ಮೊರೆ ಕೇಳಿ. ಬಂದಂತಾಯಿತು. ಶಾಂತಿಯುತ ಮುಖ, ತೇಜೋಮಯ ಕಣ್ಣುಗಳು, ಕೈಗಳಲ್ಲಿ ದಂಡ ಕಮಂಡಲು ಇರುವ ಆ ಮಹಾಮುನಿ ಫಣಿಗೌಡನನ್ನು ಕುರಿತು ಏಕ್ಕೆ ತಪಸ್ಸು ಮಾಡುತ್ತಿದ್ದೀಯೆಂದು ಕೇಳಿದನು. ಮರಿಗೌಡ ಅಡ್ಡ ಬಿದ್ದು, “ ನಾನು ದೇವಾಂಗ ಧರ್ಮಿ, ಪರಧರ್ಮಿಯರ ದಾಳಿಯಿಂದ ನಮ್ಮ ಧರ್ಮ ನಾಶವಾಗುತ್ತಿದೆ. ಉಪ್ಪಾರ ಮಾರ್ಗ ತೋರವಾಗಿದ ಎಂದನು. “ ದೇವಲ ಮಹಾಮುನಿಯ: ದೇವಾಂಗದವರ ಮೊದಲ ಗುರು, ದೇವಾಂಗ ಧರ್ಮದ ಉದ್ಘಾರಕ್ಕಾಗಿ ಗುರುಗಳ ಆಜ್ಞೆಯಂತೆ ನಿನ್ನ ಅಗಮನ ಕ್ಕಾಗಿ ಕಾದಿರುವೆ. ಈಗ ಸಕಾಲವಾಗಿದೆ ನಡೆ " ಎಂದು ಗವಿ ಯಿಂದ ಇಬ್ಬರೂ ಹೊರಬಂದರು.

ಫಣಿಗೌಡನ ಕೋರಿಕೆಯಂತೆ, ವಿದ್ಯಾನಗರದ ವೀರ ಪ್ರತಾಪ ರಾಜ ಎಲ್ಲ ಮತದವರನ್ನು ಬರಮಾಡಿಕೊಂಡನು. ರಾಜನ ಆಸ್ಥಾನ ದಲ್ಲಿ ಎಲ್ಲ ಪಂಡಿತರೂ ಸೇರಿದಾಗ ಭರಗೌಡ ಇಲ್ಲದನ್ನು ಕಂಡು ಪರಮಾದವರು ಅವನ ಮೇಲೆ ಕುಹಕವಾಡಿದರು. ಇದಕ್ಕಿ ವಂತೆ, ರಾಜ ಸಭೆಯಲ್ಲಿ ಪಾದುಕೆಗಳ ಸದ್ದು ಕೇಳಿಸಿದಾಗ ಆ ಕಡೆಗೆ ಎಲ್ಲರ ಗಮನ ಹರಿಯಿತು, ರಾಜದ್ವಾರದಲ್ಲಿ ಅಚಾನಬಾಹು, ಹೊಳೆವ ವಿಶಾಲ ಕಣ್ಣುಗಳು, ತೇಜೋವಂತ, ಜಟಾಧಾರಿ ಮುನಿಯೊಬ್ಬ ಭಳಗೌಡನೊಂದಿಗೆ ಇರುವುದು ಗೋಚರಿಸಿತು. ಸೀಮಿತಾಸನದಲ್ಲಿ ಕುಳಿತರು. ಗೌಡ ರಾಜನಿಗೆ ನಮಸ್ಕರಿಸಿ, " ದೊರೆಯ, ಇವರು ದೇವಲನ ಪರಂಪರೆಯ ದೇವಾಂಗ ಜಗದ್ಗುರು ಶ್ರೀ ಶ್ರೀ ಶ್ರೀ ಮುದ್ದುಸಂಗಸ್ವಾಮಿ ಮಹಾಮುನಿ ಗಳು, 'ದೇವಾಂಗ ಧರ್ಮ, ಪುರಾತನರು, ಶಾಸ್ತ್ರ ಸಮ್ಮತ ವೆಂದು ಇವರು ಪ್ರತಿಪಾದಿಸುವರು. ಯಾವ ಮತದವರೇ ಅಗಲಿ ಅವರ ಜೊತೆ ವಾದಿಸಬಹುದು " ಎಂದು ಸಾರಿ ಹೇಳಿದನು. ನೆರೆದಿದ್ದ ಸಭಿಕರಲ್ಲಿ ಕೆಲವರು ಇದೆಲ್ಲ ತಮಾಣಿ ಅಂದುಕೊಂಡರು.

ಮುದ್ದುಸಂಗಸ್ವಾಮಿ ನಮ್ರವಾಗಿ ನಿಂತು ವಾದದಲ್ಲಿ ಯಾರಾ ದರೂ ತನ್ನನ್ನು ಸೋಲಿಸಿದಲ್ಲಿ ತಾನು ಅವರ ಮತ ಸ್ವೀಕರಿಸುವೆ. ನಂದನು. ಗುರುಗಳೂ, ಪಂಡಿತರೂ ತಮ್ಮ ಮತಗಳೇ ಶ್ರೇಷ್ಟ ಎಂದು ವಾದ ಹೂಡಿದರು. ಶಾಸ್ತ್ರಸಮ್ಮತ ಉತ್ತರಗಳನ್ನು ಮುದ್ದುಸಂಗಸ್ವಾಮಿ ನೀಡಿ ದೇವಾಂಗ ಧರ್ಮದ ಹೆಚ್ಚಳಿಕೆಯನ್ನು ಪ್ರತಿಪಾದಿಸಿದಾಗ, ಅವರ ಅಪಾರ ವಿದ್ವತ್ತೂರ್ಣ ಅಭಿಪ್ರಾಯ ಗಳಿಗೆ ಎಲ್ಲರೂ ಮಾರುಹೋದರು, ನಿರುತ್ತರರಾದರು. ವೀರ ಪ್ರತಾಪ ಮಹಾರಾಜ ಸಿಂಹಾಸನದಿಂದ ಎದ್ದು ಬಂದು ಮುದು ಸಂಗಸ್ವಾಮಿಗೆ ಸಾಷ್ಟಾಂಗವೆರಗಿ ಅವರು ಜಗದ್ಗುರುವೆಂದು ಸಾಬ ಅವರಿಗೆ ಸಲ್ಲುವ ಎಲ್ಲ ಬಿರುದು ಬಾವಲಿಗಳನ್ನು ಕೊಟ್ಟು ಮರ್ಯಾದಿಸಿದನು.

ದೇವಲೋಕದಿಂದ ದೇವಾಂಗ ಕರೆತಂದ ಮಾನಿ, ಅಭಿಮಾನಿ ದೇವತಾ ಸ್ತ್ರೀಯರು ಹತ್ನಿಗಿಡಗಳಾಗಿ ಪ್ರಕಟವಾದ, ಆಮೋದ.    .....ಮುಂದುವರೆಯುವುದು

Devanga's Vidhana
https://t.me/joinchat/T9PZE7wMJss2eol0
https://www.facebook.com/groups/115655385522020/?ref=share
https://www.facebook.com/vidhanadevangas/
#828

Comments

Popular posts from this blog

Bengaluru_ Devanga Sangha's Centenary Year

Exploring the Lives of Sri Devala Maharishi and Sri Devara Dasimayya: Differences and Similarities.

Basketball's Rise in Cubbonpet Bengaluru.