ಶ್ರೀ ವಿಷ್ಣುವಿನ ದಶಾವತಾರ ಮತ್ತು ಡಾರ್ವಿನ್ನ ವಿಕಾಸದ ಸಿದ್ಧಾಂತ.

ಶ್ರೀ ಲಕ್ಷ್ಮಿ ಗವಿರಂಗನಾಥ ಸ್ವಾಮಿ
ಕೇವಲ ನೂರ ಅರವತ್ತು ವರ್ಷಗಳ ಹಿಂದೆ ವಿಕಾಸವಾದ ಎಂದು ಮಂಡಿಸಿದರು ಚಾರ್ಲ್ಸ್ ಡಾರ್ವಿನ್ ಆದರೂ ಅವರು ಮುಂದಿನ ಜನಾಂಗದ ಬಗ್ಗೆ ಏನನ್ನು ಹೇಳಿಲ್ಲ, ಹಿಂದಿನ ಒಂಬತ್ತು ಸ್ಥರದ ವಿಕಾಸವನ್ನು ನಿಖರವಾಗಿ ವರ್ಣಿಸಿರುವ ನಮ್ಮ ಹಿರಿಯರು ಹತ್ತನೇ ಅವತಾರವನ್ನು ಸಹ ವರ್ಣಿಸಿದ್ದಾರೆ ಅದೇ ದೇವಸ್ಥಾನಗಳಲ್ಲಿ ಶಿಲೆಗಳ ಮೇಲೆ. 
ಸತ್ಯಯುಗದಲ್ಲಿ ನಾಲ್ಕು ತ್ರೇತಾಯುಗದಲ್ಲಿ ಮೂರು ದ್ವಾಪರಯುಗದಲ್ಲಿ ಎರಡು ಅವತಾರಗಳನ್ನು ಎತ್ತಿರುವ ಶ್ರೀ ಮಹಾ ವಿಷ್ಣುವು ಕಲಿಯುಗದಲ್ಲಿ ಇನ್ನು ಪ್ರಕಟವಾಗಿಲ್ಲ. ಹಿಂದಿನ ಅವತಾರಗಳಾದ,
ಮತ್ಸ್ಯಾವತಾರ :  ಜಲಪ್ರಳಯದಿಂದ ಭೂಮಂಡಲವನ್ನು ರಕ್ಷಿಸಲು ವಿಷ್ಣುವು ಮತ್ಸ್ಯಾವತಾರದಲ್ಲಿ ಕಾಣಿಸಿಕೊಂಡನು ಇಡೀ ಭೂಮಂಡಲವನ್ನು ರಕ್ಷಿಸಿದ ಮತ್ಸ್ಯನಿಗೆ ಅಂದರೆ ಮೀನುಗಳಿಗೆ ಕೇವಲ ನೀರಿನಲ್ಲಿ ಮಾತ್ರ ಜೀವಿಸಬಲ್ಲ ಶಕ್ತಿಯಿರುವ ಪ್ರಾಣಿಗಳು ನೀರಿನಿಂದ ಹೊರಗೆ ಬಂದರೆ ಇವುಗಳಿಗೆ ಭೂಮಿಯಲ್ಲಿ ಬದುಕುವ ಶಕ್ತಿ ಇಲ್ಲ. 
ಓಂ ನಮೋ ಭಗವತೇ ವಾಸುದೇವಾಯ||
ತಸ್ಮೈ ಶ್ರೀ ಮತ್ಸ್ಯಾಯನಮಃ 
ಕೂರ್ಮಾವತಾರ : ಸಮುದ್ರ ಮಂಥನದ ಸಮಯದಲ್ಲಿ ಕೂರ್ಮಾವತಾರದಲ್ಲಿ ಪ್ರಕಟವಾದ  ವಿಷ್ಣುವು ಸಮುದ್ರದಾಳದಲ್ಲಿ ಮಂದಾರ ಪರ್ವತವನ್ನು ಹೊತ್ತು ನಿಂತುಕೊಂಡು ಮಂಥನ ಕಾರ್ಯವನ್ನು ನಿರ್ವಿಘ್ನವಾಗಿ ನಡೆಸಿಕೊಟ್ಟ ಮಹಾವಿಷ್ಣು ಮೊದಲಿಗೆ ನೀರು ಮತ್ತು ಭೂಮಿಗಳೆರಡರಲ್ಲೂ ಬದುಕಬಲ್ಲ ಪ್ರಾಣಿಯಾಗಿ ಅವತರಿಸಿದನು   ಅಂದರೆ ಆಮೆಗಳು ಶಕ್ತಿಯನ್ನು ಪಡೆದಿದ್ದವು.
ಓಂ ನಮೋ ಭಗವತೇ ವಾಸುದೇವಾಯ||
ತಸ್ಮೈ ಶ್ರೀ ಕೂರ್ಮಾಯನಮಃ 
ವರಾಹವತಾರ : ಹಿರಣ್ಯಾಕ್ಷ ನಿಂದ ಅಪಹೃತವಾಗಿ ಸಂಕಷ್ಟದಲ್ಲಿ ಇದ್ದ ಭೂಮಿಯನ್ನು ರಕ್ಷಿಸಲು ಮಹಾವಿಷ್ಣುವು  ಬಂದಿದ್ದು ವರಾಹ ಅವತಾರದಲ್ಲಿ, ಈ ಪ್ರಾಣಿಯು ಪೂರ್ತಿಯಾಗಿ ಭೂಮಿಯ ಮೇಲೆ ಜೀವಿಸಲು ಶಕ್ತಿಯುತವಾಗಿತ್ತು
ಓಂ ನಮೋ ಭಗವತೇ ವಾಸುದೇವಾಯ||
ತಸ್ಮೈ ಶ್ರೀ ವರಾಹಯನಮಃ
ನರಸಿಂಹಾವತಾರ : ಹಿರಣ್ಯಕಶಿಪುವನ್ನು ಸಂಹರಿಸಲು ಕಂಬವನ್ನು ಸೀಳಿಕೊಂಡು ಬಂದ ನರಸಿಂಹ ಅವತಾರ ಅಂದರೆ ಅರ್ಧ ಭಾಗ ಮನುಷ್ಯ ಇನ್ನರ್ಧ ಭಾಗ ಪ್ರಾಣಿ, ಮಾನವನ ವಿಕಾಸಕ್ಕೆ ನಾಂದಿ, ಭೂಮಿಯ ಮೇಲೆ ಮೊದಲಿಗೆ ಎರಡು ಕಾಲುಗಳ ಮೇಲೆ ತಲೆಯೆತ್ತಿ ನಿಂತ ಪ್ರಾಣಿ ವಿಷ್ಣುವಿನ ನಾಲ್ಕನೇಯ ಅವತಾರ ನರಸಿಂಹ.
ಓಂ ನಮೋ ಭಗವತೇ ವಾಸುದೇವಾಯ||
ತಸ್ಮೈ ಶ್ರೀ ನರಸಿಂಹಾಯನಮಃ
ವಾಮನವಾತಾರ: ಕುಬ್ಜ ಮನುಷ್ಯ, ಹಿಂದೆಮುಂದೆ ಯೋಚಿಸದೆ ಮೂರು ಅಡಿಗಳನ್ನು ದಾರಾಳವಾಗಿ ದಾನಮಾಡಿದ ಬಲಿಚಕ್ರವರ್ತಿಯನ್ನು ಬಲಿ ಪಡೆದ ವಿಷ್ಣುವಿನ ಐದನೆಯ ಅವತಾರ ವಾಮನ. ಮೊತ್ತ ಮೊದಲಿಗೆ ಕುಬ್ಜ ಮನುಷ್ಯನ ಅವತಾರ, ಸಂಪೂರ್ಣವಾದ ಮನುಷ್ಯ, ಯಾವುದೇ ಆಯುಧಗಳಿಲ್ಲ ಅಲ್ಲದೆ ಇಂದಿನ ವಿಜ್ಞಾನ ಸಹ ಒಪ್ಪಿಕೊಂಡಿದೆ ಮೊದಲ ಮಾನವನ ಎತ್ತರ ಕೇವಲ ಮೂರುವರೆ ಅಡಿಗಳೆಂದು.
ಓಂ ನಮೋ ಭಗವತೇ ವಾಸುದೇವಾಯ||
ತಸ್ಮೈ ಶ್ರೀ ವಾಮನಯನಮಃ
ಪರಶುರಾಮಾವತಾರ: ಭೂಮಂಡಲವನ್ನು ಸುತ್ತಿ ಕ್ಷತ್ರಿಯರನ್ನು ದ್ವಂಸ ಮಾಡಿದ ಪರಶುರಾಮ ಆಯುಧವನ್ನು ಹಿಡಿದ ಮೊದಲ ಮಾನವ, ಬಹುಶಃ ಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮರ ಗಿಡಗಳನ್ನು ಕಡಿಯಲು ಉಪಯೋಗಿಸಿದ ಆಯುಧ, ಆಯುಧಗಳಲ್ಲೆಲ್ಲಾ ಅತ್ಯಂತ ಕನಿಷ್ಠವಾಗಿ ಉಪಯೋಗಿಸುವವಂತಹದ್ದು ಪರಶು ಅಂದರೆ ಕೊಡಲಿ.
ಓಂ ನಮೋ ಭಗವತೇ ವಾಸುದೇವಾಯ||
ತಸ್ಮೈ ಶ್ರೀ ಪರಶುರಾಮಾಯನಮಃ
ರಾಮಾವತಾರ : ಬಿಲ್ಲು ಬಾಣಗಳಿಲ್ಲದೆ ಶ್ರೀರಾಮಚಂದ್ರನ ಚಿತ್ರ ಅಪೂರ್ಣ, ರಾಮ ಬಾಣ ರಾಮನಿಗಿಂತ ಹೆಚ್ಚು ಪ್ರಸಿದ್ಧ, ತಾಂತ್ರಿಕವಾಗಿ ಕೊಡಲಿಗಿಂತ ಬಹಳ ಮುಂದುವರಿದ ಆಯುಧ, ತನ್ನನ್ನು ತಾನು ರಕ್ಷಿಸಿಕೊಳ್ಳುವುದಲ್ಲದೆ ಬೇಟೆಗಾಗಿ ಯುದ್ಧ ಕೌಶಲ್ಯತೆಗಾಗಿ ಉಪಯೋಗಿಸಿದ ಆಯುಧ. ಸೇತುವೆಯನ್ನು ಕಟ್ಟಿದ ಪ್ರಪಂಚದ ಮೊದಲ ತಂತ್ರಜ್ಞ ಜೊತೆಗೆ ಕುಟುಂಬದ ಮೌಲ್ಯಗಳನ್ನು ಸ್ಥಾಪಿಸಿದವನು.
ಓಂ ನಮೋ ಭಗವತೇ ವಾಸುದೇವಾಯ||
ತಸ್ಮೈ ಶ್ರೀ ರಾಮಚಂದ್ರಾಯನಮಃ
ಬಲರಾಮಾವತಾರ : ಹಲಾಯುಧವನ್ನು ಮಾನವನು ಭೂಮಿಯನ್ನು ಉಳುವುದಕ್ಕೆ ಬಿಟ್ಟು ಯುದ್ಧಮಾಡಲು ಎಂದು ಉಪಯೋಗಿಸಿಲ್ಲ ಆದರೂ ಬಲರಾಮನಿಗೆ ಆಯುಧ ನೇಗಿಲು, ಕೇವಲ ಮರಗಿಡಗಳ ಮೇಲೆ ಅವಲಂಬಿಸದೆ, ಪ್ರಾಣಿ-ಪಕ್ಷಿಗಳ ಬೇಟೆಯಿಂದ ಮಾತ್ರವಲ್ಲದೆ ಆಹಾರಕ್ಕಾಗಿ ಮೊದಲ ಬಾರಿಗೆ ವ್ಯವಸಾಯವನ್ನು ಕಲಿತ ಮನುಷ್ಯ.
ಓಂ ನಮೋ ಭಗವತೇ ವಾಸುದೇವಾಯ||
ತಸ್ಮೈ ಶ್ರೀ ಬಲರಾಮಾಯನಮಃ
ಕೃಷ್ಣಾವತಾರ : ವ್ಯವಸಾಯವನ್ನು ಕಲಿತ ಮೇಲೆ ಮನುಷ್ಯ ತನ್ನ ಕರ್ತವ್ಯದ ಕಡೆ ಗಮನ ಕೊಡುವುದು ಮತ್ತು ಅಲಂಕಾರ, ಶೃಂಗಾರ, ಹಾಡು-ನೃತ್ಯಗಳ ಕಡೆ ಆಸಕ್ತಿ ತೋರಿಸಿದ್ದು ಶ್ರೀಕೃಷ್ಣ ಪರಮಾತ್ಮ, ಅಷ್ಟಲ್ಲದೆ ಅವನ ಕೈಯಲ್ಲಿದ್ದ ಸುದರ್ಶನ ಚಕ್ರ ಹಿಂದಿನ ಆಯುಧಗಳಿಗಿಂತ ಬಹಳ ಬಲಿಷ್ಠವಾದದ್ದು, ಶತ್ರುವನ್ನು ಕೊಂದು ತನ್ನ ಬಳಿಗೆ ವಾಪಾಸು ಬರುವಂತಹ ತಾಂತ್ರಿಕವಾಗಿ ಮತ್ತಷ್ಟು ಮುಂದುವರೆದ ಆಯುಧ. ಜೊತೆಗೆ ಕರ್ತವ್ಯವನ್ನು ಹೇಳಿಕೊಟ್ಟ ಶ್ರೀಕೃಷ್ಣ ಜಗದ್ಗುರು.
ಓಂ ನಮೋ ಭಗವತೇ ವಾಸುದೇವಾಯ||
ತಸ್ಮೈ ಶ್ರೀ ಕೃಷ್ಣಾಯನಮಃ
ಹೀಗೆ ಮಹಾವಿಷ್ಣುವಿನ ಒಂಬತ್ತು ಅವತಾರಗಳ ರೂಪದಲ್ಲಿ ಮಾನವನ ವಿಕಾಸವನ್ನು ಅತ್ಯದ್ಭುತವಾಗಿ ಎಲ್ಲಿಯೂ ಲೋಪವಾಗದಂತೆ ನಮ್ಮ ಹಿರಿಯರು ವಿವರಿಸಿದ್ದಾರೆ ಕೇವಲ ಪುಸ್ತಕಗಳಲ್ಲಿ ಮಾತ್ರವಲ್ಲದೆ ಹತ್ತನೆಯ ಅವತಾರವನ್ನು ಸೇರಿಸಿ ಸಾವಿರಾರು ವರ್ಷಗಳ ಮುಂಚೆಯೇ ದೇವಸ್ಥಾನಗಳಲ್ಲಿ ಮಾನವನ ವಿಕಾಸವನ್ನು ಶಿಲೆಯಲ್ಲಿ ಕೆತ್ತಿ ಶಾಶ್ವತವಾಗಿಸಿದ್ದಾರೆ
ಕಲ್ಕಿಯವತಾರ : ದೇವಸ್ಥಾನಗಳಲ್ಲಿರುವ ನಮ್ಮ ಹಳೆಯ ಶಿಲ್ಪಗಳ ಪ್ರಕಾರ ಕಲ್ಕಿ ಭಗವಾನ್ ಮನುಷ್ಯ ರೂಪದಲ್ಲೇ ಇಲ್ಲ ಮುಖ ಎಳೆದಂತೆ ಉದ್ದವಾಗಿದೆ ಹಾಗು ಬಾಯಿ ಚೂಪಾಗಿದೆ ಮತ್ತೆ ನಾಲ್ಕು ಕೈಗಳು ವಾಪಾಸು ಬಂದಿವೆ ಹಿಂದಿನ ಬರಹಗಳಲ್ಲಿ ವಿವರಿಸಿರುವ ಪ್ರಕಾರ ಅತ್ಯಂತ ಬಲಶಾಲಿ ಮತ್ತು ತನ್ನ ಬಣ್ಣವನ್ನು ಸಹ ಬದಲಿಸಬಲ್ಲ.  ಕೈಯಲ್ಲಿರುವ ಆಯುಧದಿಂದ ಬಹಳ ಮಂದಿಯಮೇಲೆ ಒಂದೇ ಬಾರಿಗೆ ಆಕ್ರಮಣ ಮಾಡಬಲ್ಲ ಇಂದಿನ ವಿಜ್ಞಾನದ ಪ್ರಕಾರ ಅಂತಹ ಆಯುಧ ಲೇಸರ್ ಅಥವಾ ಇನ್ಫ್ರಾರೆಡ್ ಆಯುಧವಾಗಿರಬಹುದು.
ಓಂ ನಮೋ ಭಗವತೇ ವಾಸುದೇವಾಯ||
ತಸ್ಮೈ ಶ್ರೀ ಕಲ್ಕಿಯೇನಮಃ
ಮುಂದಿನ ಜನಾಂಗ ಮಾನವ ಜನಾಂಗವಂತೂ ಅಲ್ಲ.
ಓಂ ಆಂ ಶ್ರೀಂ ಹ್ರೀಂ ಕಂ ಕೂರ್ಮಾಯ ನಮಃ"
ಗೋವಿಂದಾ ಗೋವಿಂದಾ ಗೋವಿಂದಾ
ಓಂ ನಮೋ ಭಗವತೇ ವಾಸುದೇವಾಯ ।
ಶ್ರೀ ಲಕ್ಷ್ಮೀ ಗವಿರಂಗನಾಥ ಸ್ವಾಮಿ ಗವಿರಂಗಾಪುರ.
ಗವಿರಂಗಪ್ಪ ಸಪ್ಪೆ ಪರಪ್ಪ
GaviRangappa S P
Devanga's Vidhana and Gavi's Touch Of Health and Fitness. Bengaluru.
#828
https://youtu.be/uyhM1cXJjRQ

Comments

Popular posts from this blog

Bengaluru_ Devanga Sangha's Centenary Year

Exploring the Lives of Sri Devala Maharishi and Sri Devara Dasimayya: Differences and Similarities.

Basketball's Rise in Cubbonpet Bengaluru.