ನಾವು, ನಮ್ಮ ದೇವಾಂಗ ಸಮಾಜ
ಕೈಮಗ್ಗದ ನೂಲಿನ ಬಟ್ಟೆಗಳು ಪ್ರಚಾರದಲ್ಲಿದ್ದಷ್ಟು ಕಾಲವೂ ಅಂದರೆ ನೇಯ್ದೆಯನ್ನೇ ಉದ್ಯೋಗವಾಗಿ ಸ್ವೀಕರಿಸಿದಂಥ ನಮ್ಮ ಜನರು ಉಂಡುಟ್ಟು ಸುಖವಾಗಿದ್ದರು. ಧಾರ್ಮಿಕ ವೃತ್ತಿಯಲ್ಲಿ ಯಾವುದೇ ಬಗೆಯ ಪರಿವರ್ತನೆಯಾಗಿರಲಿಲ್ಲ. ಅವರ ಸಮೃದ್ಧವಾದ ನಾಡಿನಲ್ಲಿ ಅವರ ಸೀಮಿತವಾದ ಅವಶ್ಯಕತೆ ಗಳು ಪೂರೈಸಲ್ಪ ಲ್ಪಡುತ್ತಿದ್ದವು. ಆಧ್ಯಾತ್ಮಿಕ ಪ್ರವೃತ್ತಿಯ ಜನ ರಾದುದರಿಂದ ಐಹಿಕ ಜೀವನದ ವೈಭವಕ್ಕೆ ಮನಸೋಲುತ್ತಿರ ಲಿಲ್ಲ. 10ನೆಯ ಶತಮಾನದ ಸುಮಾರಿಗೆ ದೇವಾಂಗ ಸಮಾಜದ ಜನರೂ ಇತರ ಸಮಾಜದವರಿಗೆ ಯಾವ ರೀತಿಯಲ್ಲೂ ಹಿಂದುಳಿ ಬರಲಿಲ್ಲ. ಅವರಿಗೆ ಸಾಮಾಜಿಕ ಸ್ನಾನ-ಮಾನ, ಮರ್ಯಾದೆ ಗಳು ಇದ್ದವು. ಸರ್ವಜ್ಞನ ಒಂದೆರಡು ವಚನಗಳೇ ಇದಕ್ಕೆ ಸಾಕ್ಷಿ.
ಬೇಡಂಗೆ ಶುಚಿಯಲ್ಲ | ಬೋಡಂಗೆ ರುಚಿಯಲ್ಲ ಕೂಡಿಲ್ಲದಂಗೆ ಸುತರಿಲ್ಲ | ಜೇಡ ತಾ ಮೂಢಾತ್ಮನಲ್ಲಿ ಸರ್ವಜ್ಞ |
ಕೇವಲ ಮಗ್ನದಲ್ಲಿಯೇ ಕುಳಿತಿರುವನಾದ್ದರಿಂದ ಜೇಡ ಮೂಢಾ ಐಹಿಕ ಅಥವಾ ಅಧ್ಯಾತ್ಮಿಕ ವಿಷಯಗಳ ಗಂಧವೇ ಅವನಿಗಿರಲಿಲ್ಲವೆಂದು ಭಾವಿಸಲಾಗದು. ಜೇಡನ (ನೇಯಿಗೆ ಯವನ) ಕಾಯಕದ ಮಹತ್ವ ಕೂಡ ಒಂದು ವಚನದಲ್ಲಿ ಮೂಡಿಬಂದಿದೆ.
ಅಗ ಬಡವಗೆ ಲೇಸು | ಬುಗ್ಗೆಯಗಳಿಗೆ ಬೇಸು
ತಗ್ಗಿನ ಗದ್ದೆ ಉಳಲೇಸು | ಜೇಡಂಗೆ ಮಗ್ಗ ಲೇಸೆಂದ ಸರ್ವಜ್ಞ |
ಜೇಡನಿಗೆ ಮಗ್ಗ ಲೇಸೆಂದು ಹೇಳಿದ ಮಾತ್ರಕ್ಕೆ ಅದು ಸಂಕುಚಿತ ಕಸಬೆನ್ನಲಾಗದು. ಜೇಡ ಎಲ್ಲವೂ ನತಿಳಿಯಬಲ್ಲ ಎಂದು ಹೇಳಿದಾಗಲೇ ದೇವಾಂಗದವರಿಗಿದ್ದ ಸಾಮಾಜಿಕ ಮಾನ ಮಯ್ಯಾದ ಗಳ ಕಲ್ಪನೆ ಆಗಿಯೇ ಆಗುತ್ತದೆ. ಸುಮಾರು 11ನೆಯ ಶತಕದ ಪೂರ್ವಾರ್ಧದಲ್ಲಿ ಚಾಲುಕ್ಯ ಜಯಸಿಂಹ ದೊರೆಯ ಕಾಲದಲ್ಲಿ ಜ್ಞಾನಿ ಜೇಡರ ದಾಸಿಮಯ್ಯ ಇದ್ದುದು ನಿಜವಾಗೂ ಹೆಮ್ಮೆ ಪಡತಕ್ಕ ಸಂಗತಿ.
ಕಾಲಾನುಕ್ರಮದಲ್ಲಿ ಇಂಗ್ಲೆಂಡಿನಲ್ಲಿ ಔದ್ಯೋಗಿಕ ಕ್ರಾಂತಿ ಆದ ಹತ್ತಿ ಬಟ್ಟೆಯ ಗಿರಣಿಗಳು ಸಾಪಿತವಾದವು. ಬ್ರಿಟಿಷರ ಮೇಲೆ ಆಳ್ವಿಕೆಯೊಂದಿಗೆ ಅವರ ಸಂಸ್ಕೃತಿಯೂ ನಮ್ಮ ನಾಡನ್ನು ಆವರಿ ಬ್ರಿಟ್ನನ ಗಿರಣಿಗಳಿಗೆ ಭಾರತದ ಹತ್ತಿ ರವಾನೆಯಾಗ ತೊಡಗಿತು. ಅಲ್ಲಿಂದ ತಯಾರಾಗಿ ಬಂದ ಮಿಲ್ಲಿನ ಬಟ್ಟೆಗಳನ್ನೇ ಭಾರತೀಯರು ತೊಡಗಿದರು. ಇದರಿಂದಾಗಿ ಜೇಡರ ಉದ್ಯೋಗ ಅಳಿಯತೊಡಗಿತು. ಈ ಕಾಯಕದಲ್ಲಿ ಸ್ವಲ್ಪವೂ ಲಾಭಾಂಶವಿಲ್ಲದಂತಾಗಲು ಕೆಲವರು ಬೇರೆ ಉದ್ಯೋಗಗಳನ್ನು ಅವರಿಸಿದರು. ಇದನ್ನೆ: ಮುಂದುವರೆಸಿಕೊಂಡು ಬಂದೂ
ಸಂಪನ್ನರಾಗಿರುವವರು ಕೇವಲ ಬೆರಳೆಣಿಕೆಯಷ್ಟೇ ಕುಟುಂಬಗಳು ಮುಂದೆ ಪವರ್ ಮಗ್ಗಗಳು ಬಂದಾಗ ನಮ್ಮ ಜನತೆ ಸ್ವಲ್ಪ ಚೇತರಿಸಿಕೊಂಡರಷ್ಟೇ.
ಉದ್ಯೋಗದಲ್ಲಿ ಈ ಇಳಿಮುಖ, ಹಾಗೂ ಆಗ ಸಂಭವಿಸಿದ ಎರಡು ಮಹಾ ಯುದ್ಧಗಳಿಂದಾದ ಪರಿಸ್ಥಿತಿಗಳಿಂದ ಜರ್ಜರಿತ ವಾದ ನಮ್ಮ ಸಮಾಜದ ಕುಟುಂಬಗಳು ನ್ಯೂ ಚೇತರಿಸಿ ಕೊಂಡಿಲ್ಲ. ಕುಟುಂಬದಲ್ಲಿ ಶಾಲೆಗೆ ಹೋಗಿ ಕಲಿಯುವ ಮಕ್ಕಳು ಕೂಡ ನೂಲಿನ ಉದ್ಯೋಗದಲ್ಲಿ ಸಹಾಯ ಮಾಡದೇ ಹೊಟ್ಟೆ ತುಂಬದಿರುವ ಕುಟುಂಬಗಳು ನಮ್ಮ ಸಾಕಷ್ಟು ಇವೆ. ಅಂಥ ಕುಟುಂಬಗಳಲ್ಲಿ ಗಂಡು ಮಕ್ಕಳಿಗೆ ಕನ್ನಡವನ್ನೇ ಓದಿ, ಬರೆಯಲು ತಿಳಿಯುವಷ್ಟು ಶಿಕ್ಷಣ ಕೊಡಲು ಸಾಧ್ಯವಿಲ್ಲದಿರುವಾಗ, ಹೆಣ್ಣು ಮಕ್ಕಳ ಶಿಕ್ಷಣದ ಮಾತನ್ನಂತೂ ಎತ್ತುವ ಹಾಗೇ ಇಲ್ಲ. ಇಂದಿನ ವಿಜ್ಞಾನ ಯುಗದಲ್ಲೂ ನಮ್ಮ ಜನತೆಯಲ್ಲಿ ಕುರುಡು ವಿಶ್ವಾಸ, ಮೂಢನಂಬಿಕೆ, ಸಂಪ್ರದಾಯ ಗಳಿಗೇನೂ ಕೊರತೆಯಿಲ್ಲ. ಪರಂಪರಾ ಪ್ರಿಯ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ, ಅವರು ತಮ್ಮಿಂದ ದೂರವಾಗುತ್ತಾರೆ ಸಾಮಾನ್ಯ ಕ್ರಮ ಇದಕ್ಕೆ ಕಾರಣವಿರಬಹುದು. ಆದರೆ, ಇತ್ತೀಚೆಗೆ ನಗರಗಳಲ್ಲಿರುವ ನಮ್ಮ ಸಂತೋಷಕರ ವಿಯಯ. ಆ ರೀತಿ ಸುಲಕಿತರು ನಡೆ ಯ ಸಮಾಜಕ್ಕೆ ಕಲ್ಯಾಣ ಮಾಡುವಂಥದೇನು, ಸಮಾಜದ ಪ್ರಗತಿಗೆ ಅಡ್ಡಿ ತರುವುದೇನು ಎಂಬುದನ್ನು ಯೋಚಿಸುತ್ತ, ಸಮಾಜದ ಮಹಾ ವೃಕ್ಷದಲ್ಲಿ ತಾನೂ ಒಂದು ಬೇರೆಂದು ಬಗೆದು ತನ್ನ ಪ್ರತಿಭೆಯನ್ನೂ ಶಕ್ತಿಯನ್ನೂ ಸಮಾಜ ಬಾಂಧವರ ಅಭಿವೃದ್ಧಿ ಗಾಗಿ ವಿನಿಯೋಗಿಸಬೇಕು.
ಸಮಾಜದ ಏಳಿಗೆ ಎರಡು ವಿಧವಾಗಿ ಆಗಬಹುದು. ಒಂದು ಸರಳ ಯುಜಿಗೆ, ಶಾಸ್ತ್ರ, ಕಲೆಗಳ ಅಭಿವೃದ್ಧಿ, ಇನ್ನೊಯ ಆನುವಂಶಿಕವಾಗಿ ಬರುವ ಗುಣ, ಶಕ್ತಿ ಇದೆ. ನಮ್ಮ ಸದರಿ ಈಗ ಗುಣ, ಶಕ್ತಿ, ವಿದ್ಯೆಗಳಿಗೆ ಕೊರತೆಯಿಲ್ಲ, ಅವುಗಳ ಯೋಗ್ಯವಾದ, ಸಮರ್ಥ, ಹಾಗೂ ಸಮಯೋಳ ಬಳಿಯಿಂದ ಸಮಾಜದ ಏಳಿಗೆಯಾಗುವುದರಲ್ಲಿ ಸಂದೇಹವಿಲ್ಲ. ಸಮಾಜದಲ್ಲಿ ಸಾವಿರಾರು ಮನೋ ಭಾವನೆಗಳುಳ್ಳ ಜನರು ಇದೇ ಇರುವದ ರಿಂದ ಅನೇಕತೆ, ಇವೆಲ್ಲವನ್ನೂ - ವೈಶಿಷ್ಟ್ಯಗಳಿಗೇನೂ ಕೊರತೆ ಇಲ್ಲ, ಅವರ ಬಾವಿದ ಏಕೀಭಾವ ಹಾಗೂ ಸಮಾಜದ ಹಿತ ಸಾಧನೆ, ಪ್ರಗತಿಗಳ ಮುಖ್ಯ ಗುರಿಯಾಗಿದ್ದಲ್ಲಿ ಅನೇಕಾರ ಅಂತರಂಗದಿಂದಲೇ ಏಕತ್ವ ಏಳುತ್ತದೆ.
ಯಾವ ರೀತಿಯಾಗಿ ದೇವರ ವಿಚಾರದಲ್ಲಿ ಮನುಷ್ಯನಿಗಿರುವ ನಂಬಿಕೆ, ಪೂಜೆ ಪುನಸ್ಕಾರ, ನಡವಳಿಕೆಗಳು ಧರ್ಮವನ್ನ ಕೊಳ್ಳು ವುದೋ ಅಂತೆಯೇ, ಸುನೀತಿಯ ಧರ್ಮವೇ ನಮ್ಮ ಮಕ್ಕಳಿಗೆ ದೇವಾಂಗ ಸಮಾಜದ ಧರ್ಮ, ನೀತಿ ನಂಬಿಕೆಗಳ
ಹಸಿವು, ನಿದ್ರೆ, ಭಯ ಇವನ್ನು ಬೆಳೆಸಿದಂತೆಲ್ಲ ಬೆಳೆವುದರಿಂದ ಎಚ್ಚರವಿರಲಿ.
ತಿಳಿವಳಿಕೆ ಧರ್ಮ ಗುರುಗಳಿಂದ ದೊರೆಯಬೇಕು. ಸುನೀತಿ ಯೆಂದರೆ ಕೇವಲ ಚಾರಿತ್ರ್ಯ ಮಾತ್ರವಲ್ಲ. ಸಮಾಜದಲ್ಲಿ ನಾವು ಪರಸ್ಪರ ವಿನಯ, ಸೌಹಾರ್ದ ಭಾವನೆಗಳಿಂದ ನಡೆದುಕೊಳ್ಳು ವದೂ ನೀತಿಯೇ, ಅದನ್ನೇ ಮಾನವ ಧರ್ಮ, ಮಾನವತೆ ಎನ್ನುವುದು. ಇನ್ನೊಬ್ಬರ ಬಗ್ಗೆ ವಿಶ್ವಾಸ, ಗೆಳೆತನ, ಅನುಕಂಪ, ಸಹಾನುಭೂತಿ, ಇವೇ ಮೊದಲಾದ ಭಾವನೆಗಳೇ ಮಾನವತೆ ಯನ್ನು ರೂಪಿಸುತ್ತವೆ. ಯಾವ ದೇವರ ದಾಸಮಯ್ಯ, ಹನ್ನೊಂದನೆಯ ಶತಮಾನದಲ್ಲೇ ಸ್ತ್ರೀ ಪುರುಷ ಸಮಾನತೆಯನ್ನು
ಅಧ್ಯಾತ್ಮ ದೃಷ್ಟಿಯಿಂದಲಾದರೂ ಪ್ರತಿಪಾದಿಸಿದನೋ, ಅಂಥ ದೇವರ ದಾಸಮಯ್ಯನ ಕುಲದವರೆಂದು ಅಭಿಮಾನ ಪಡುವ ನಾವು, ಇಂದಿನ 20ನೇ ಶತಮಾನದಲ್ಲಿ ಮುಂದುವರಿಯುತ್ತಿರುವ ಜಗತ್ತಿನ ವಿದ್ಯಮಾನಗಳನ್ನು ಅರಿತು, ಜಗತ್ತಿನ ಅನ್ಯ ಸಮಾಜಗಳ ಜನತೆಯೊಂದಿಗೆ ಸಮಸಮರಾಗಿ ಮುಂದುವರಿಯಬೇಕೆಂಬ ನಾವು ಪ್ರೇರಣೆಯನ್ನು ಹೊಂದಬೇಕು. ಇಲ್ಲದಿದ್ದಲ್ಲಿ ನಾವು ಮತ್ತೂ ಹಿಂದುಳಿಯುತ್ತೇವೆ.
"ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ ಇರುಳೆಲ್ಲ ನಡೆದನಾ ಸುಂಕಕ್ಕಂಜಿ, ಕಳವೆ ಎಲ್ಲ ಹೋಗಿ ಬರಿಯ ಗೋಣಿ ಉಳಿಯಿತ್ತು. ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ."
ಗವಿರಂಗಪ್ಪ ಎಸ್ ಪಿ.
ದೇವಂಗನ ವಿಧಾನ.
Comments
Post a Comment