"ಶ್ರೀ ಹೇಮಕೂಟ ಗಾಯತ್ರಿ ಪೀಠ ಹಂಪಿ: 1371–2026"
Chapter One ಗುರು ಶಬ್ದದ ಅರ್ಥ, ಗುಕಾರಸ್ಯ ಗುಣಾತೀಶ, ರೂಪಾತೀತ ಗುಣಗಳಿಗೂ ರೂಪಕ್ಕೂ ಅತೀತರಾ ದಂತಹ ಜಗದ್ಗುರು ಶ್ರೀ ಮುದ್ದುಸಂಗ ಮಹಾಮುನಿ ಪ್ರಪಂಚ ವನ್ನು ಉದ್ದಾರ ಮಾಡಿದರು. ಮಾನವನ ಮಾನ, ಅಭಿಮಾನ ರಕ್ಷಣೆಗಾಗಿ ಈಶ್ವರನ ಹಣೆ ಗಣ್ಣಿಂದ ಹುಟ್ಟಿದ ದೇವಾಂಗನ (ನವಲನ) ಅನುಚರರ ಪರದ ಪವಿತ್ರ ದೇವಾಂಗ ಮತವಿದು. ದೇವಾಂಗ ಧರ್ಮ ಸುಮಾರು 5-6 ಶತಮಾನಗಳ ಹಿಂದೆ ಸ್ವಧರ್ಮ ರಕ್ಷಕರಿಲ್ಲದೆ ಪರಧರ್ಮದ ದಾಳಿಗೆ ಸಿಕ್ಕಿ, ದೇವಾಂಗದವರು ಬಲವಂತವಾಗಿ ಮತಾಂತರ ಗೊಂಡ ಕಾಲದಲ್ಲಿ ಗಂಗಾವತಿ ಗ್ರಾಮದಲ್ಲಿ ದೇವಾಂಗ ಧರ್ಮೋ ದ್ವಾರಕ ಮಹಾಪುರುಷ ಫಣಿಗೌಡ ಜನಿಸಿದನು. ದೇವಾಂಗ ಧರ್ಮ ಗ್ರಂಥಗಳ ಸತತ ಪಠನೆ, ಧರ್ಮ ಗ್ರಂಥಾನ್ವೇಷಣೆ ಮುಂತಾ ದವಲ್ಲಿ ನಿರತನಾಗಿ ಚೌಡೇಶ್ವರಿ ಅಮ್ಮನವರ ಪರದು ಭಕ್ತನಾಗಿ ಕುಲಕಾಯಕವಾದ ನೇಯ್ಕೆ ಕೆಲಸ ಮಾಡುತ್ತಿದ್ದನು. ಕಲ ಕಾಲಾನಂತರ ಬಲವಂತದಿಂದ ಮತಾಂತರಗೊಳಿಸಲು ಮುಂದಾದ ಪರಮತದವರು ಗೌಡನ ದೇವಾಂಗ ಮತ ಪರ ವಾದವನ್ನು ಒಪ್ಪದೇ, ವಿದ್ಯಾನಗರಾಧಿಪತಿ ವೀರಪ್ರತಾಪನ ಮುಂದೆ ಹೋದರು. ಆಗ ಘಣಗೌಡ ರಾಜನಿಗೆ ನಮ್ಮ ದೇವಾಂಗ ಧರ್ಮ, ಗುರು, ದೈವತ, ರೂಢಿ ನೀತಿಗಳೇ ಬೇರೆ. ನಮ್ಮ ಆಚಾರ ವ್ಯವಹಾರಗಳು, ಗುರು ಪರಂಪರೆ ಶಾಸ್ತ್ರ ಸಮ್ಮತ, ಅನಾದಿ ಕಾಲದವು" ಎಂದು ಅರಿಕೆ ಮಾಡಿದನು. " ನಿನ್ನ ದೇವಾಂಗ ಮತ ಸನಾತನ ಧರ್ಮವೆಂದು ಸಮರ್ಥಿಸಿ ಗುರುವನ್ನು ತೋರಿದರೆ ಮಾತ್ರ ನಿನ್ನ ವಾದ ಸಮ್ಮತ ವೆಂದು ರಾಜ ಹೇಳಿದನು. ಫಣಿಗೌಡ ಅರಸನಿಂದ ಕೆಲ ದಿ...